ವಾಣಿ ವಿಲಾಸ ಸಾಗರ
ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ವಾಣಿವಿಲಾಸ ಸಾಗರ ಜಲಾಶಯವು ಸಹ ಒಂದಾಗಿದೆ. ವೇದಾವತಿ ನದಿಗೆ ಅಡ್ಡಲಾಗಿ “ಮಾರಿಕಣಿವೆ” ಎಂಬಲ್ಲಿ ಮೈಸೂರು ಮಹರಾಜರು ಸ್ವಾತಂತ್ರ್ಯ ಪೂರ್ವದಲ್ಲಿ ಈ ಅಣೆಕಟ್ಟನ್ನು ನಿರ್ಮಿಸಿದರು. ಈ ಸಾಗರವು ಹಿರಿಯೂರಿನಿಂದ 20 ಕಿ.ಮೀ ಹಾಗೂ ಚಿತ್ರದುರ್ಗದಿಂದ 60 ಕಿ.ಮೀ. ದೂರದಲ್ಲಿದೆ. ಜಲಾಶಯದ ಒಂದು ಬದಿಯಿಂದ ನೋಡಿದಾಗ “ಭಾರತದ ಭೂಪಟ”ದ ಚಿತ್ರಣವನ್ನು ನಾವು ನೋಡಬಹುದಾಗಿದೆ. ಈ ಅಣೆಕಟ್ಟನ್ನು ಅತ್ಯಾಧುನಿಕ ತಂತ್ರಜ್ಞಾನಗಳಿಂದ ನಿರ್ಮಿಸಲಾಗಿದೆ.
ಫೋಟೋ ಗ್ಯಾಲರಿ
ಎಲ್ಲವನ್ನೂ ವೀಕ್ಷಿಸಿತಲುಪುವ ಬಗೆ :
ವಿಮಾನದಲ್ಲಿ
ಬೆಂಗಳೂರು ಮತ್ತು ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣಗಳು.
ರೈಲಿನಿಂದ
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ನೇರವಾದ ರೈಲ್ವೇ ಸಂಪರ್ಕವಿದೆ.
ರಸ್ತೆ ಮೂಲಕ
ಚಿತ್ರದುರ್ಗದಿಂದ ಹಿರಿಯೂರಿಗೆ ರಾಜ್ಯ ಸಾರಿಗೆ ಬಸ್ಸುಗಳ ಸಂಪರ್ಕವಿದೆ. ಹಿರಿಯೂರಿನಿಂದ ವಾಣಿ ವಿಲಾಸ ಸಾಗರಕ್ಕೆ ಖಾಸಗಿ ಬಸ್ಸುಗಳ ಸಂಪರ್ಕವಿದೆ.