Close

ಕೃಷಿ

ಕೃಷಿ ಇಲಾಖೆಯು ಕೃಷಿ ಬೆಳೆಗಳ ಉತ್ಪಾದನಾ ಮಟ್ಟವನ್ನು ಹೆಚ್ಚಿಸಿಕೊಂಡು ಒಟ್ಟಾರೆ ಆಹಾರ ಉತ್ಪಾದನೆಯನ್ನು ಅಧಿಕಗೊಳಿಸಿ ರೈತರ ನಿವ್ವಳ ಆದಾಯವನ್ನು ಸುಧಾರಿಸಿಕೊಂಡು ಜೀವನ ಮಟ್ಟವನ್ನು ಉತ್ತಮಪಡಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಇಂತಿವೆ.

ಯೋಜನೆಗಳು

  1. ಕೃಷಿ ಭಾಗ್ಯ ಯೋಜನೆ:

    ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರಿತ ಕೃಷಿಯಿಂದ ಸುಸ್ಥಿರ ಕೃಷಿಯಾಗಿ ರೂಪಾಂತರಗೊಳಿಸುವುದು. ಕೃಷಿ ಹೊಂಡ, ತುಂತುರು ನೀರಾವರಿ ಘಟಕಗಳ ಅಳವಡಿಕೆಯಿಂದ ಮಳೆ ನೀರನ್ನು ಬೆಳೆಗಳ ಸಂಧಿಗ್ಧ ಹಂತದಲ್ಲಿ ಉಪಯೋಗಿಸಿಕೊಂಡು ಸಮರ್ಪಕ ನೀರಿನ ನಿರ್ವಹಣೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶಗಳು.

  2. ಕೃಷಿ ಯಂತ್ರಧಾರೆ:

    ಎಲ್ಲ ವರ್ಗದ ರೈತರಿಗೆ ಮನೆ ಬಾಗಿಲಿಗೆ ಸಕಾಲದಲ್ಲಿ ಕೈಗೆಟುಕುವ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಸಲುವಾಗಿ ಹೋಬಳಿ ಮಟ್ಟದಲ್ಲಿ “ಕೃಷಿ ಯಂತ್ರಧಾರೆ” ಕೇಂದ್ರಗಳನ್ನು ಸ್ಥಾಪಿಸಿದೆ.

  3. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆ:

    ಪ್ರತಿ ರೈತರಿಗೆ ಗರಿಷ್ಟ 02 ಹೆಕ್ಟರಗೆ ಒಳಪಟ್ಟು ರಿಯಾಯಿತಿಯಲ್ಲಿ ವಿತರಣೆ.

  4. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ:

    ಪ್ರಕೃತಿ ವಿಕೋಪದಿಂದ ಉಂಟಾಗುವ ರೈತರ ಬೆಳೆ ನಷ್ಟವನ್ನು ತುಂಬಿಸಿಕೊಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆ ರೂಪಿಸಿದ್ದು, ರೈತರಿಗೆ ಬಹು ಉಪಯೋಗಿಯಾಗಿದ್ದು, ಸದರಿ ಯೋಜನೆಯಡಿ ಹೋಬಳಿ, ಗ್ರಾಮ ಪಂಚಾಯತಿಯನ್ನು ನಿರ್ಧರಿತ ಘಟಕವಾಗಿ ರೂಪಿಸಿದೆ.

  5. ರಿಯಾಯಿತಿ ದರದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳು, ಕೃಷಿ ಸಂಸ್ಕರಣ ಘಟಕಗಳು ಹಾಗೂ ತುಂತುರು / ಹನಿ ನೀರಾವರಿ ಘಟಕಗಳ ವಿತರಣೆ:

    ಇಲ್ಲಿ ಇತರೆ ರೈತರಿಗೆ ಶೇ.50ರಲ್ಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.90ರ ರಿಯಾಯಿತಿಯಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳು ಹಾಗೂ ಕೃಷಿ ಸಂಸ್ಕರಣ ಘಟಕಗಳ ವಿತರಣೆ ಮಾಡಲಾಗುವುದು. ಹನಿ ಮತ್ತು ತುಂತುರು ನೀರಾವರಿ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.90ರ ರಿಯಾಯಿತಿಯಲ್ಲಿ ನೀಡಲಾಗುವುದು.

  6. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ :

    ಈ ಯೋಜನೆಯಲ್ಲಿ ನೀರು ಸಂಗ್ರಹಣಾ ವಿನ್ಯಾಸಗಳು ಬದು ನಿರ್ಮಾಣ, ನಾಲ ಬದು, ಚೆಕ್ ಡ್ಯಾಂ, ಜಿನುಗುಕೆರೆ, ಕೃಷಿ ಹೊಂಡ ಹಾಗೂ ಗುಂಡುಕಲ್ಲಿನ ತಡೆಗಳ ನಿರ್ಮಾಣ, ಅರಣ್ಯ ಘಟಕಗಳಡಿ ನೆಡುತೋಪು ನಿರ್ಮಾಣ ಹಾಗೂ ಖುಷ್ಕಿ ತೋಟಗಾರಿಕೆ ಚಟುವಟಿಕೆಗಳ ಅನುಷ್ಠಾನ ಮಾಡಲಾಗುತ್ತಿದೆ. ದಿನ್ನೆಯಿಂದ ಹಳ್ಳದ ಕಡೆಗೆ ಜಲಾನಯನ ತತ್ವದಡಿ ಭೂ ಉಪಚಾರ ಮಾಡಲಾಗುತ್ತಿದೆ.

  7. ಮಣ್ಣು ಆರೋಗ್ಯ ಅಭಿಯಾನ :

    ಜಿಲ್ಲೆಯ ಎಲ್ಲಾ ರೈತರ ಹಿಡುವಳಿದಾರರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸುವುದು ಪೋಷಕಾಂಶಗಳ ಕೊರತೆ ನೀಗಿಸಲು, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆಗೆ ಒತ್ತು.

  8. ರಿಯಾಯಿತಿ ದರದಲ್ಲಿ ವಿವಿಧ ಕೃಷಿ ಪರಿಕರಗಳ ವಿತರಣೆ :

    ವಿವಿಧ ಕೃಷಿ ಪರಿಕರಗಳಾದ ಜಿಪ್ಸಂ, ಜಿಂಕ್ ಸಲ್ಪೇಟ್, ಹಸಿರೆಲೆಗೊಬ್ಬರ ಬೀಜ, ಬೋರಾಕ್ಸ್, ಲಘು ಪೋಷಕಾಂಶಗಳ ಮಿಶ್ರಣ, ಎರೆಹುಳು ಗೊಬ್ಬರ, ಸಂಪದ್ಬರಿತ ಕಾಂಪೊಸ್ಟ್ ವಿವಿಧ ಜೈವಿಕ ಗೊಬ್ಬರಗಳು, ಸಸ್ಯ ಸಂರಕ್ಷಣಾ ಔಷಧಿಗಳು ಹಾಗೂ ಉಪಕರಣಗಳು, ಇತ್ಯಾದಿಗಳು ಶೇ.50ರ ರಿಯಾಯಿತಿ ದರದಲ್ಲಿ ವಿತರಣೆ.

  9. ಭೂಚೇತನ ಯೋಜನೆ :

    ಖುಷ್ಕಿ ಪ್ರದೇಶದ ಬೆಳೆಗಳಲ್ಲಿ ಶೇ.20 ರಷ್ಟು ಉತ್ಪಾದಕತೆ ಹೆಚ್ಚಿಸುವುದು ಮುಖ್ಯ ಉದ್ದೇಶ. ರೈತರಿಗೆ ಮನವರಿಕೆ ಮಾಡಲು ಶೇ.50ರ ರಿಯಾಯಿತಿಯಲ್ಲಿ ವಿವಿಧ ಕೃಷಿ ಪರಿಕರಗಳನ್ನು ವಿತರಿಸಿ ರೈತರಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದು.

  10. ರೈತರ ಆತ್ಮಹತ್ಯೆ / ಹಾವು ಕಡಿತಕ್ಕೆ ಪರಿಹಾರ :

    ಆತ್ಮಹತ್ಯೆ ರೈತರ ಕಷ್ಟಗಳಿಗೆ ಪರಿಹಾರವಲ್ಲ. ಸರ್ಕಾರ ಎಂದೆಂದಿಗೂ ರೈತರ ಪರವಾಗಿದೆ. ಆದರೂ ಸಹ ಆತ್ಮಹತ್ಯೆ ಹೊಂದಿದ ರೈತ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ರೂ. 5.00 ಲಕ್ಷ ಪರಿಹಾರ ರೈತ ಕುಟುಂಬಕ್ಕೆ ಲಭ್ಯತೆ ಇದೆ. ಹಾವು ಕಡಿತ, ಆಕಸ್ಮಿಕ ಮರಣ ಪ್ರಕರಣಗಳಿಗೆ ರೂ. 2.00 ಲಕ್ಷ ಪರಿಹಾರ ಸರ್ಕಾರದ ವತಿಯಿಂದ ವಿತರಿಸಲಾಗುವುದು.

  11. ಸಾವಯವ ಕೃಷಿ :

    ಸುಸ್ಥಿರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಸರ್ಕಾರೇತರ ಸಂಸ್ಥೆಗಳ ಮೂಲಕ ರೈತರಿಗೆ ತರಬೇತಿ, ಪ್ರವಾಸ, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಮನವರಿಕೆ ಮಾಡಿಸಲಾಗುವುದು.

  12. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ :

    ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿಹೊಂಡ, ನಾಲ ಬದು, ಚೆಕ್ ಡ್ಯಾಂ ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಸಲುವಾಗಿ ಎರೆಹುಳು ಘಟಕ ನಿರ್ಮಾಣ.

ಸಿಬ್ಬಂದಿ ವಿವರ

ಕ್ರ. ಸಂ ಮುಖ್ಯಸ್ಥರು ಮೊಬೈಲ್‌ ಸಂಖ್ಯೆ
1 ಜಂಟಿ ಕೃಷಿ ನಿರ್ದೇಶಕರು 8277930950
2 ಉಪ ಕೃಷಿ ನಿರ್ದೇಶಕರು-1 ಚಿತ್ರದುರ್ಗ ವಿಭಾಗ 8277930951
3 ಉಪ ಕೃಷಿ ನಿರ್ದೇಶಕರು-೨ ಚಳ್ಳಕೆರೆ ವಿಭಾಗ 8277930952
4 ಸಹಾಯಕ ಕೃಷಿ ನಿರ್ದೇಶಕರು, ಚಿತ್ರದುರ್ಗ 8277930980
5 ಸಹಾಯಕ ಕೃಷಿ ನಿರ್ದೇಶಕರು, ಚಳ್ಳಕೆರೆ 8277930961
6 ಸಹಾಯಕ ಕೃಷಿ ನಿರ್ದೇಶಕರು, ಹಿರಿಯೂರು 8277930996
7 ಸಹಾಯಕ ಕೃಷಿ ನಿರ್ದೇಶಕರು, ಹೊಳಲ್ಕೆರೆ 8277931025
8 ಸಹಾಯಕ ಕೃಷಿ ನಿರ್ದೇಶಕರು, ಹೊಸದುರ್ಗ 8277931038
9 ಸಹಾಯಕ ಕೃಷಿ ನಿರ್ದೇಶಕರು, ಮೊಳಕಾಲ್ಮೂರು 8277931049