Close

ವಾಣಿ ವಿಲಾಸ ಸಾಗರ

ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ವಾಣಿವಿಲಾಸ ಸಾಗರ ಜಲಾಶಯವು ಸಹ ಒಂದಾಗಿದೆ.  ವೇದಾವತಿ ನದಿಗೆ ಅಡ್ಡಲಾಗಿ “ಮಾರಿಕಣಿವೆ” ಎಂಬಲ್ಲಿ ಮೈಸೂರು ಮಹರಾಜರು ಸ್ವಾತಂತ್ರ್ಯ ಪೂರ್ವದಲ್ಲಿ ಈ ಅಣೆಕಟ್ಟನ್ನು ನಿರ್ಮಿಸಿದರು.  ಈ ಸಾಗರವು ಹಿರಿಯೂರಿನಿಂದ 20 ಕಿ.ಮೀ ಹಾಗೂ ಚಿತ್ರದುರ್ಗದಿಂದ 60 ಕಿ.ಮೀ. ದೂರದಲ್ಲಿದೆ. ಜಲಾಶಯದ ಒಂದು ಬದಿಯಿಂದ ನೋಡಿದಾಗ “ಭಾರತದ ಭೂಪಟ”ದ ಚಿತ್ರಣವನ್ನು ನಾವು ನೋಡಬಹುದಾಗಿದೆ. ಈ ಅಣೆಕಟ್ಟನ್ನು ಅತ್ಯಾಧುನಿಕ ತಂತ್ರಜ್ಞಾನಗಳಿಂದ ನಿರ್ಮಿಸಲಾಗಿದೆ.

ಫೋಟೋ ಗ್ಯಾಲರಿ

ಎಲ್ಲವನ್ನೂ ವೀಕ್ಷಿಸಿ
  • ಸಾಗರ 2
    ವಾಣಿ ವಿಲಾಸ ಸಾಗರ
  • ಸಾಗರ
    ವಾಣಿ ವಿಲಾಸ ಸಾಗರ

ತಲುಪುವ ಬಗೆ :

ವಿಮಾನದಲ್ಲಿ

ಬೆಂಗಳೂರು ಮತ್ತು ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣಗಳು.

ರೈಲಿನಿಂದ

ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ನೇರವಾದ ರೈಲ್ವೇ ಸಂಪರ್ಕವಿದೆ.

ರಸ್ತೆ ಮೂಲಕ

ಚಿತ್ರದುರ್ಗದಿಂದ ಹಿರಿಯೂರಿಗೆ ರಾಜ್ಯ ಸಾರಿಗೆ ಬಸ್ಸುಗಳ ಸಂಪರ್ಕವಿದೆ. ಹಿರಿಯೂರಿನಿಂದ ವಾಣಿ ವಿಲಾಸ ಸಾಗರಕ್ಕೆ ಖಾಸಗಿ ಬಸ್ಸುಗಳ ಸಂಪರ್ಕವಿದೆ.