Close

ಜಿಲ್ಲಾ ಪಂಚಾಯತ್‌

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಜಿಲ್ಲಾ ಪಂಚಾಯತ್ ಕಚೇರಿಯ ಸುಗಮ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕಾಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಒಬ್ಬ ಅಧಿಕಾರಿ ರಾಜ್ಯ ಸರ್ಕಾರದಿಂದ ನೇಮಕಗೊಂಡಿದ್ದಾರೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವಿಭಾಗಗಳ ಇತರೆ ಅಧಿಕಾರಿಗಳು ಆಡಳಿತದಲ್ಲಿ ಸಹಾಯ ಮಾಡುತ್ತಾರೆ.

ಕರ್ನಾಟಕ ಪಂಚಾಯತ್ ರಾಜ್ ಬಿಲ್, 1993 ಕರ್ನಾಟಕ ಜಿಲ್ಲಾ ಪರಿಷದ್, ತಾಲ್ಲೂಕು ಪಂಚಾಯತ್ ಸಮಿತಿ, ಮಂಡಲ ಪಂಚಾಯತ್ ಮತ್ತು ನ್ಯಾಯ ಪಂಚಾಯತ್ ಮಸೂದೆ್ 1983 ರ ಬದಲಿಗೆ 73 ನೇ ಸಂವಿಧಾನ (ತಿದ್ದುಪಡಿ) ಮಸೂದೆ 1991 ರಲ್ಲಿ ಪ್ರಸ್ತಾಪಿಸಿದ ಬದಲಾವಣೆಗಳನ್ನು ಅನುಸರಿಸಿ ಜಾರಿಗೆ ಬಂದಿದೆ.

ಚುನಾಯಿತ ಪ್ರತಿನಿಧಿಗಳಿಂದ ಕೂಡಿದ ಗ್ರಾಮ, ತಾಲೂಕಾ ಮತ್ತು ಜಿಲ್ಲಾ ಮಟ್ಟದ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸುವುದು ಮತ್ತು ಜನರು ಹೆಚ್ಚಾಗಿ ಬಾಗವಹಿಸುವುದರಿಂದ ಗ್ರಾಮೀಣ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.

ಗ್ರಾಮ ಪಂಚಾಯತ್ ಗ್ರಾಮ ಅಥವಾ ಗ್ರಾಮದ ಗುಂಪನ್ನು ಒಳಗೊಂಡಿರುವ ಪಂಚಾಯತ್ ರಾಜ್ ಸಂಸ್ಥೆಯು ಮೊದಲ ಹಂತವಾಗಿದೆ. ರಾಜ್ಯ ಚುಣಾವಣಾ ಆಯೋಗವು ಕಾಲಕಾಲಕ್ಕೆ ಸೂಚಿಸಿದಂತೆ, ಪ್ರತಿ 400 ಜನರಿಗೆ ಒಬ್ಬರಂತೆ ಅಥವಾ ಗ್ರಾ ಮಪಂಚಾಯತ್ ಪ್ರದೇಶದ ಒಂದು ಭಾಗಕ್ಕೆ ಒಬ್ಬ ಪ್ರತಿನಿಧಿಯಂತೆ ಗ್ರಾಮ ಪಂಚಾಯತ್ ಸದಸ್ಯರನ್ನು ಒಳಗೊಂಡಿರುತ್ತದೆ. ಎಸ್ಸಿ ಮತ್ತು ಎಸ್ಟಿಗಳಿಗೆ ಮೀಸಲಾದ ಸ್ಥಾನಗಳ ಸಂಖ್ಯೆ ಎಸ್ಸಿ ಮತ್ತು ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿರುತ್ತದೆ, ಆದರೆ ಕನಿಷ್ಠ ಒಂದು ಸೀಟನ್ನು ಎಸ್ಸಿ, ಎಸ್ಟಿಗೆ ಸೇರಿದ ವ್ಯಕ್ತಿಗೆ ಗ್ರಾಮ ಪಂಚಾಯತ್ನಲ್ಲಿ ಕಾಯ್ದಿರಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯೊಬ್ಬರಿಗೆ ಗ್ರಾಮ ಪಂಚಾಯತ್ ನ ಒಟ್ಟು ಸ್ಥಾನಗಳಲ್ಲಿ 1/3 ನೇ ಸ್ಥಾನ ಮೀಸಲಿರಿಸಿದೆ. ಕನಿಷ್ಟ 50% ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹೊಂದಿದ್ದು, ಅವರು ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ, 1993 ರ 45 ರ ನಿಬಂಧನೆಗಳ ಪ್ರಕಾರ ಗ್ರಾಮ ಪಂಚಾಯತ್ ಸದಸ್ಯರು ಆಯ್ಕೆ ಮಾಡುತ್ತಾರೆ. ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ, 1993 ರ ಸೆಕ್ಷನ್ 49 ಅಧ್ಯಕ್ಷತೆ ಅಥವಾ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಅಧಿಕಾರವಿರುತ್ತದೆ. ಗ್ರಾಮ ಪಂಚಾಯತ್ ಸಭೆಗಾಗಿ ಇರುವ ಕೋರಮ್ ಒಟ್ಟು ಸದಸ್ಯರಲ್ಲಿ 50% ಆಗಿದೆ. ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ, 1993 ರ ಪರಿಚ್ಛೇದ 58 ರಲ್ಲಿ ನೀಡಲಾದ ಎಲ್ಲ ಕಾರ್ಯಗಳನ್ನು ಗ್ರಾಮ ಪಂಚಾಯತ್ ನಿರ್ವಹಿಸುತ್ತದೆ. ಆಯ್ದ ಸಂಸ್ಥೆಗಳು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟ. ಜಿಲ್ಲೆಯಲ್ಲಿ 189 ಗ್ರಾಮ ಪಂಚಾಯತಿಗಳಿವೆ.

Somashekar S J
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶ್ರೀ. ಸೋಮಶೇಖರ ಎಸ್.ಜೆ, ಭಾ.ಆ.ಸೇ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಸಂಪರ್ಕ

ವಿಳಾಸ : ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಷೇಡಿಯಂ ರಸ್ತೆ, ಜಿಲ್ಲಾ ಪಂಚಾಯತಿ, ಚಿತ್ರದುರ್ಗ -577501

ದೂರವಾಣಿ : 08194-223061

ಇ-ಮೇಲ್‌ : ceo_zp_ctd@nic.in

ಉಪ ಕಾರ್ಯದರ್ಶಿ

ಸಂಪರ್ಕ

ಮೊಬೈಲ್ : 9480861001
 
ದೂರವಾಣಿ : 08194-226058

ಇ-ಮೇಲ್‌ : dszpctd@gmail.com

ಮುಖ್ಯ ಯೋಜನಾ ಅಧಿಕಾರಿ

ಸಂಪರ್ಕ

ಮೊಬೈಲ್: 9480861004

ದೂರವಾಣಿ : 08194-222792

ಇ-ಮೇಲ್‌ :  cpozpcta1@gmail.com

ಮುಖ್ಯ ಲೆಕ್ಕಾಧಿಕಾರಿ

ಸಂಪರ್ಕ

ಮೊಬೈಲ್: 9480861003

ದೂರವಾಣಿ : 08194-223064

ಇ-ಮೇಲ್‌ :  caozpcta@gmail.com

ಯೋಜನಾ ನಿರ್ದೇಶಕರು

ಸಂಪರ್ಕ

ಮೊಬೈಲ್: 9480861002

ದೂರವಾಣಿ : 08194-235723

ಇ-ಮೇಲ್‌ :  pdzpcta123@gmail.com

JJM