Close

ಆರೋಗ್ಯ

ಆರೋಗ್ಯ ಇಲಾಖೆಯಿಂದ ನಾಗರೀಕರಿಗೆ ದೊರೆಯು ಸೇವಾ ಸೌಲಭ್ಯಗಳು ಯೋಜನೆಗಳು

  • ಗರ್ಭಿಣಿ ನೋಂದಾವಣಿ ಗರ್ಭಿಣಿ ತಪಾಸಣೆ ಸಾಂಸ್ಥಿಕ ಹೆರಿಗೆ ಪ್ರಧಾನಮಂತ್ರಿ ಸುರಕ್ಷಿತ ಮಾತೃ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿಯ ವಿಶೇಷ ತಪಾಸಣೆ ಪ್ರತಿ ತಿಂಗಳು 9 ನೇ ತಾರೀಖಿನಂದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಿ ಗಂಡಾಂತರದ ಗರ್ಭಧಾರಣೆ ಗುರುತಿಸಿ ಉನ್ನತ ಚಿಕಿತ್ಸೆಗೆ ನಿರ್ದೇಶಿಸುವುದು/ ಚಿಕಿತ್ಸೆ ನೀಡುವುದು (ಆಹಾರ ಶಿಕ್ಷಣ)ಆರೋಗ್ಯ ಶಿಕ್ಷಣ ನೀಡುವುದು.
  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ತಾಯಂದಿರಿಗೆ  ಜನನಿ ಸುರಾಕ್ಷಾ ಯೋಜನೆ ಎಸ್.ಸಿ .ಎಸ್.ಟಿ ಬಿ.ಪಿ.ಎಲ್ ಕುಟುಂಬಗಳಿಗೆ  ಸಾಮಾನ್ಯ  ಹೆರಿಗೆಗೆ ರೂ.700/-  ಸಿಜೇರಿಯನ್ ಹೆರಿಗೆಗೆ ರೂ.700/- (ಖಾಸಗಿ ಆಸ್ಪತ್ರೆ ) ಮತ್ತು ಮನೆ ಹೆರಿಗೆ ಗಳಿಗೆ ರೂ.500/- ಸಹಾಯಧನ ನೀಡಾಗುತ್ತದೆ.
  • 104 ಸಹಾಯವಾಣಿ ಆರೋಗ್ಯ ಸಮಸ್ಯೆಗಳ ಮಾಹಿತಿಗಾಗಿ ಉಚಿತ ಕರೆ 104 ಸಹಾಯವಾಣಿ ಪಾವತಿ ಮೇಲೆ ತುರ್ತು ಅವಶ್ಯಕ ರಕ್ತ ಪಡೆಯಲು ಉಚಿತ ಕರೆ 108 ತುರ್ತು ಅಂಬ್ಯುಲೇನ್ಸ್ ಸೇವೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಶ್ರದ್ಧಾಂಜಲಿ ವಾಹನ ಪಾವತಿ ಸೇವಾ ಸೌಲಭ್ಯ ನೀಡಲಾಗುತ್ತದೆ.
  • 0-2 ವರ್ಷ ದ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ 10 ಮಾರಕ ರೋಗಗಳ ವಿರುದ್ಧ ಪ್ರತಿ ಗುರುವಾರ ಲಸಿಕೆಯನ್ನು ನೀಡುವ ಜಾಗೃತಿ ಗೊಳಿಸುವ ಸೇವೆಯನ್ನು ಒದಗಿಸುವುದು.
  • ತೀ ವ್ರ ತರಹದ ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಜಿಲ್ಲಾ ಆಸ್ಪತ್ರೆಯ ಎನ್.ಆರ್.ಸಿ ಕೇಂದ್ರಗಳಲ್ಲಿ 14 ದಿನಗಳ  ಉಚಿತ  ಆರೈಕೆ  ಮತ್ತು ವೈದ್ಯಕೀಯ ಸೇವೆ ಓದಿಸಲಾಗುತ್ತಿದೆ. ಈ ಯೋಜನೆಯಲ್ಲಿ ಬರುವ ತಾಯಿಂದರವರಿಗೆ ದಿನಕ್ಕೆ ರೂ.174/- ರಂತೆ ಗರಿಷ್ಠ 14 ದಿನಗಳಿಗೆ ಕೂಲಿ ಪರಿಹಾರವನ್ನು ಉಚಿತ ಊಟವನ್ನು ತಾಯಿ ಮಗುವಿಗೆ ನೀಡಲಾಗುತ್ತದೆ.
  • ಸಾರ್ವಜನಿಕರಿಗೆ ಜನಸಂಖ್ಯಾ ಸ್ಥಿರತೆಗಾಗಿ ಕುಟುಂಬ ಕಲ್ಯಾಣ ಯೋಜನೆಗಳಾದ ಐ.ಯು.ಸಿ.ಡಿ, ನಿರೋಧ್ , ನುಂಗುವ ಮಾತ್ರೆಗಳು ಮಹಿಳಾ ಸಂತಾನಹರಣ ಶಸ್ತ್ರ ಚಿಕಿತ್ಸೆ , ಪುರುಷ ಸಂತಾನ ಹರಣ ಚಿಕಿತ್ಸೆ ಸಹಾಯ ಧನದೊಂದಿಗೆ ಉಚಿತವಾಗಿ ನೀಡಲಾಗುತ್ತದೆ. (ಶಾಶ್ವತ ವಿಧಾನಗಳಿಗೆ ಮಾತ್ರ)
  • ಕಬ್ಬಿಣಾಂಶ ಮಾತ್ರೆಗಳ ವಿತರಣೆಗೆ ನೀಲಿ ಮಾತ್ರೆ ಕಿಶೋರಿಯರಿಗೆ (6 ರಿಂದ 10, ಪಿ.ಯು.ಸಿ ಎಲ್ಲಾ ವಿದ್ಯಾರ್ಥಿಗಳಿಗೆ) WIFS ವಾರಕ್ಕೊಮ್ಮೆ ವಿತರಿಸುವ ಕಬ್ಬಿಣಾಂಶ ಮಾತ್ರೆಗಳ ಯೋಜನೆ ) 1 ರಿಂದ 5 ನೇ ತರಗತಿಯ ಎಲ್ಲಾ ಮಕ್ಕಳಿಗೆ ಕೆಂಪು ಬಣ್ಣದ ಕಬ್ಭಿಣಾಂಶದ ಮಾತ್ರೆಯನ್ನು ಪ್ರತಿ ಸೋಮವಾರ  ಉಚಿತವಾಗಿ ನೀಡಲಾಗುತ್ತದೆ.
  • ರಾಷ್ಟ್ರೀಯ ಕಿಶೋರಿ ಸುರಕ್ಷಾ ಕಾರ್ಯಕ್ರಮದಡಿ (ಆರ್.ಕೆ.ಎಸ್.ಕೆ) ಕಿಶೋರಿಯರಿಗೆ ಉಚಿತ ನ್ಯಾಪ್ ಕಿನ್ ವಿತರಣೆ
  • ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆಯಡಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ನಿರ್ದೇಶಿಸಲಾಗುತ್ತದೆ.
  • ಆರೋಗ್ಯ ಕರ್ನಾಟಕ ಯೋಜನೆಯಡಿ  ರೂ . 2 ಲಕ್ಷ  ವರೆವಿಗೂ ಉನ್ನತ ಮಟ್ಟದ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಸರ್ಕಾರಿ ಆಸ್ಪತ್ರೆಗಳಿಂದ ನಿರ್ದೇಶಿತರಾದವರಿಗೆ ನೀಡಲಾಗುತ್ತದೆ.
  • ಎಲ್ಲಾ ಪ್ರಾಥಮಿಕ  ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ/ತಪಾಸಣೆ ಪ್ರಯೋಗಾಲಯಗಳಲ್ಲಿ ರಕ್ತ/ಮೂತ್ರ ಪರೀಕ್ಷೆ ಉಚಿತ ಔಷಧಿ ಸೌಲಭ್ಯಗಳನ್ನು ನೀಡಲಾಗುತ್ತದೆ.
  • ಕೀಟಜನ್ಯ ರೋಗಗಳ ಸರ್ವೇಕ್ಷಣೆ, ಜ್ವರ ಸಮೀಕ್ಷೆ ಲಾರ್ವಸಮೀಕ್ಷೆ ಸೂಕ್ತ ಉಚಿತ ಚಿಕಿತ್ಸೆಗಳನ್ನು   ನೀಡುವುದು. ನಿಯಂತ್ರಣ ಕ್ರಮಗಳ ಬಗ್ಗೆ  ಆರೋಗ್ಯ ಶಿಕ್ಷಣ ನೀಡಲಾಗುತ್ತದೆ.
  • ಸಾಂಕ್ರಾಮಿಕ ರೋಗಗಳ ಸರ್ವೇಕ್ಷಣೆ ರೋಗ ಪರೀಕ್ಷೆ /ಪ್ರಯೋಗಾಲಯ ಪರೀಕ್ಷೆ /ಉಚಿತ ಪರೀಕ್ಷೆ, ನಿಯಂತ್ರಣ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ.
  • ಕ್ಷಯರೋಗ ನಿಯಂತ್ರಣಾ ಕಾರ್ಯಕ್ರಮದಲ್ಲಿ ಪ್ರಕರಣ ಪತ್ತೆ ಹಚ್ಚುವುದು ಕಫ್ ಪರೀಕ್ಷೆ, ನೇರ ನಿಗಾವಣೆ ಚಿಕಿತ್ಸೆ ಉಚಿತವಾಗಿ ಮನೆ ಬಾಗಿಲಿಗೆ ನೀಡುವುದು ನಿಯಂತ್ರಣ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ.
  • ಕುಷ್ಠರೋಗ ನಿಯಂತ್ರಣಾ ಕಾರ್ಯಕ್ರಮದಲ್ಲಿ ಪ್ರಕರಣ  ಪತ್ತೆ ಹಚ್ಚುವುದು ಬಹು ಔಷದ  ಚಿಕಿತ್ಸೆ ಉಚಿತವಾಗಿ ಮನೆ ಬಾಗಿಲಿಗೆ ನೀಡುವುದು ನಿಯಂತ್ರಣ  ಆರೋಗ್ಯ ಶಿಕ್ಷಣ ನೀಡಲಾಗುತ್ತದೆ.
  • ದಂತಭಾಗ್ಯ ಯೋಜನೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋದೊಂದಿಗೆ ದಂತಪಕ್ತಿಗಳನ್ನು ಅಳವಡಿಸಲಾಗುತ್ತದೆ.
  • ರಾಷ್ಟ್ರೀಯ ಮಾನಸಿಕ ಕಾರ್ಯಕ್ರಮದಡಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಗಳವಾರ ಶುಕ್ರವಾರದಂದು ಮಾನಸಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನಡೆಸಲಾಗುತ್ತದೆ.
  • ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ ಮುಂತಾದವುಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ಉಚಿತವಾಗಿ ನೀಡಲಾಗುವುದು.
  • ರಾಷ್ಟ್ರೀ ಯ ಶ್ರವಣದೋಷ ನಿಯಂತ್ರಣಾ ಕಾರ್ಯಕ್ರಮದಲ್ಲಿ ಕಿವುಡುತನಕ್ಕೆ ಸಂಬಂಧಿಸಿದ ಸೇವಾ ಸೌಲಭ್ಯ ಒದಗಿಸಲಾಗುವುದು.
  • ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಕಣ್ಣಿನ ಪೂರೆ ಚಿಕಿತ್ಸೆ, ಉಚಿತ ಕನ್ನಡಕಗಳನ್ನು ವಿತರಿಸಲಾಗುತ್ತದೆ.